ಅಧ್ಯಕ್ಷರ ಸಂದೇಶ

 

ನಾವೇಕೆ ಕನ್ನಡ ಪ್ರತಿಭಾನ್ವೇಷಣೆ ಮಾಡುತ್ತಿದ್ದೆವೆ ?

 

 

ಕನ್ನಡಿಗನ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಕದಂಬ ಸಾಮ್ರಾಜ್ಯ ನಿರ್ಮಾಣವಾಯಿತು.

ಆ ಸ್ವಾಭಿಮಾನದ ಜ್ವಾಲೆಯನ್ನು ಪ್ರಜ್ವಲಿಸಿ ಜಗತ್ತಿಗೆ ತೋರಿಸಿದ ಕೀರ್ತಿ ಮಯೂರನಿಗೆ ಸಲ್ಲಬೇಕು.
ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದರೆ ಮಯೂರನ ಕದಂಬ ಸಾಮ್ರಾಜ್ಯ ನಿರ್ಮಾಣದಲ್ಲಿ ನಮ್ಮಲ್ಲಿನ ಪೂರ್ವಜರು
ಹೆಗಲು ಕೊಟ್ಟು ದುಡಿದಿದ್ದಾರೆ ಎನ್ನುವುದು ಅರಿವಿಗೆ ಬರುತ್ತದೆ.ಶೂನ್ಯವನ್ನು ಒಂದು ಮಾಡುವ ತಾಕತ್ತು ನಮ್ಮ ನೆಲಕ್ಕಿದೆ.

ಹಾಗಾಗಿ,ಇಲ್ಲಿ ಬೆಳೆದ ಆಡಳಿತಗಾರರು ದೇಶ-ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ.ಅಂತಹ ಪ್ರೇರಕ ಶಕ್ತಿಯಾದ ಮಯೂರನ ಹೆಸರನ್ನು ಸ್ಮರಿಸುತ್ತಾ,
ತಾಳಗುಂದದ ಗತವೈಭವನ್ನು ಹೊರಜಗತ್ತಿಗೆ ತೋರಿಸಬೇಕಾಗಿದ್ದು ಕನ್ನಡಿಗರ ಆದ್ಯ ಕರ್ತವ್ಯವಾಗಿದೆ.ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆ ರಾಜ್ಯದಲ್ಲಿಯೆ
ಪ್ರಥಮ ಎನ್ನುವಂತ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿದ್ದು. ಈ ಕಾರ್ಯದ ಮೂಲಕ ಕನ್ನಡದ ಮೂಲ ಪುರುಷ,
ಮೂಲ ನೆಲೆಯ ಇತಿಹಾಸವನ್ನು ಮೆಲಕು ಹಾಕುವ ಪ್ರಯತ್ನ ಮಾಡಲಾಗುತ್ತಿದೆ.

ಇಲ್ಲಿಯ ತನಕ ಸಾಕಷ್ಟು ಸರ್ಕಾರಗಳು, ಸಂಘ-ಸಂಸ್ಥೆಗಳ ಬಂದರು ಅದು,ಏಕೋ? ಏನೋ? ಕದಂಬ ಸಾಮ್ರಾಜ್ಯದ ಸ್ಥಾಪಕ ಮಯೂರ
ಹಾಗೂ ಮೂಲನೆಲೆ ತಾಳಗುಂದ ಗ್ರಾಮವನ್ನು ನಿರ್ಲಕ್ಷಿಸುತ್ತಾ ಬಂದಿದ್ದು, ಕನ್ನಡಿಗರಿಗೆ ನೋವಿನ ಸಂಗತಿಯಾಗಿದೆ. ಹಾಗಾಗಿ,
ನಮ್ಮ ಸ್ನೇಹಿತರು ತಾವೇ ಒಂದು ಸಂಸ್ಥೆ ಕಟ್ಟಿಕೊಂಡು ಕನ್ನಡ ತಾಯಿಗೆ ತಮ್ಮ ಅಳಿಲು ಸೇವೆ ಸಲ್ಲಿಸಲು ಹಾತೊರಿಯುತ್ತಿದ್ದು.ಅದರ ಮತ್ತೊಂದು
ಪ್ರಯತ್ನವೇ ”ಮಯೂರ” ಕನ್ನಡ ಪ್ರತಿಭಾನ್ವೇಷಣೆ ಪರೀಕ್ಷೆ, ಈ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ, ಅಭಿಮಾನ ಮೂಡಿಸುವ
ಜೊತೆಯಲ್ಲಿ ಮಯೂರ ಹಾಗೂ ತಾಳಗುಂದ ಗ್ರಾಮದ ಗತ ವೈಭವ ಮತ್ತೆ ಮೆಲಕು ಹಾಕುವ ಪ್ರಯತ್ನ ಮಾಡುತ್ತಿದೆ.

ಭಾಷೆ ಎನ್ನುವುದು ಭಾವನಾತ್ಮಕ ವಿಚಾರವಾಗಿದ್ದು, ಈ ಭಾವನೆಗಳು ಕನ್ನಡಿಗರಲ್ಲಿ ಬದಲಾಗುತ್ತಿರುವುದು ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಸಂಬಂಧ, ಸಂಪ್ರದಾಯ, ಆಚರಣೆಗಳು ಮುದೊಂದು ದಿನ ನಶಿಸುವ ಸಾಧ್ಯತೆಯ ಭಯ ತಂದಿದೆ.
ಉದಾಹರಣೆಗೆ: ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷರು ‘‘ಗುಡ್‘‘ ‘‘ವೆರಿ ಗುಡ್‘‘ಎಂದಾಗ ಹರ್ಷಪಡುವ ಮಕ್ಕಳು,ಪೋಷಕರು,‘‘ಚೆನ್ನಾಗಿ‘‘
ಅಥವಾ ‘‘ಉತ್ತಮವಾಗಿ‘‘ ಎಂಬ ಪದ ಪ್ರಯೋಗ ಮಾಡಿದಾಗ ಪ್ರತಿಕ್ರಿಯೆ ನೀಡುವುದಿಲ್ಲ, ಈ ಎರಡು ಪದಗಳ ಅರ್ಥದಲ್ಲಿ ವ್ಯತ್ಯಸಾವಿಲ್ಲದಿದ್ದರು,
ಮಕ್ಕಳು, ಪೋಷಕರ ಭಾವನೆಗಳಲ್ಲಿ ವ್ಯತ್ಯಾಸ ಕಾಣುತ್ತಿದ್ದೇವೆ. ಈ ವ್ಯತ್ಯಾಸವನ್ನು ಹೋಗಲಾಡಿಸಲು ನಾವು ಕನ್ನಡ ಭಾಷೆ ಕಟ್ಟುವ
ರಚನಾತ್ಮಕ ಕಾರ್ಯ ಮಾಡಬೇಕಾಗಿದ್ದು.ಹಾಗಾಗಿ, ಮಕ್ಕಳಿಗಾಗಿ ”ಮಯೂರ” ಕನ್ನಡ ಪ್ರತಿಭಾನ್ವೇಷಣೆ ಪರೀಕ್ಷೆ ಆಯೋಜಿಸಿದ್ದು.
ಈ ಕಾರ್ಯಕ್ರಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ಸಾಹ ಹಾಗೂ ಪ್ರೇರಣೆ ತರಲಿದೆ.
ಅಂತಹ ನೈಜ ಪ್ರತಿಭೆ ಹೊಂದಿರುವ ಮಕ್ಕಳು ಮಾತ್ರ ಭಾಗವಹಿಸಲು ಅವಕಾಶವಿದ್ದು.
ಸೂಕ್ತ ಪುರಸ್ಕಾರ ಸಹ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ನೋ) ನೀಡಲಿದೆ.
ಹಾಗಾಗಿ,ಈ ಪರೀಕ್ಷೆಯಲ್ಲಿ ಭಾಗವಹಿಸಲು ಸುವರ್ಣ ಅವಕಾಶ ಸಿಕ್ಕ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ
ಕನ್ನಡದ ಬಗ್ಗೆ ಜಾಗೃತಿ ಮೂಡಿಸ ಬೇಕಾಗಿದೆ ಎಂದು ಮನವಿ ಮಾಡುತ್ತೇವೆ.

 

ಇಂತಿ ನಿಮ್ಮ ವಿಶ್ವಾಸಿ
ಎಂ.ನವೀನ ಕುಮಾರ್
ಸಂಸ್ಥಾಪಕ ಅಧ್ಯಕ್ಷರು,
ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ನೋ)