ಈ-ನೆಟ್ ನ ಬಗ್ಗೆ

ಈ-ನೆಟ್ ಇನ್ಪಾರ್‌ಮ್ಯಾಟಿಕ್ಸ್ (ರಿ),ಶಿರಾಳಕೊಪ್ಪ
ಈ-ನೆಟ್ ಇನ್ಪಾರ್‌ಮ್ಯಾಟಿಕ್ಸ್ ಒಂದು ಉದಯೋನ್ಮಕ ಸಂಸ್ಥೆಯಾಗಿದ್ದು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಮುಖ್ಯ ಕಛೇರಿ ಹೊಂದಿದೆ.

ಈ-ನೆಟ್ ಆಪ್ ಲೈನ್ ಮಾರಾಟವನ್ನು ಉತ್ತೇಜಿಸುತ್ತಿದ್ದು, ಆನ್‌ಲೈನ್ ಮಾರಾಟ ಜಾಲಗಳಾದ
ಪ್ಲಿಪ್‌ಕಾರ್ಟ್,ಅಮೇಜಾನ್,ಸ್ನಾಪ್‌ಡೀಲ್ ಮುಂತಾದವುಗಳಲ್ಲಿ ಖರೀದಿಸಲು ಬಡಜನರಿಗೆ,ಗ್ರಾಮೀಣ ಜನರಿಗೆ,
ಅವಿದ್ಯಾವಂತರಿಗೆ ಸಹಕರಿಸುತ್ತಿದೆ.

ಇಂದಿನ ತಂತ್ರಜ್ಞಾನ ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಿದೆ. ಹೊಸ ತಂತ್ರಜ್ಞಾನದ ಬೆಳವಣೆಗೆಯಿಂದ ನಮ್ಮ ದೇಶ ಬದಲಾಗುತ್ತಿದೆ ತಂತ್ರಜ್ಞಾನದ ಅರಿವು ಮತ್ತು ಅದರ ಬಳಕೆಯ ಉಪಯೋಗ ನಮ್ಮ ಹಳ್ಳಿಯ ಜನರನ್ನು,ಬಡ ಜನರನ್ನು,ಅವಿಧ್ಯಾವಂತರನ್ನು ತಲುಪಿಲ್ಲ.ತಂತ್ರಜ್ಞಾನದ ಲಾಭ ಪಡೆಯುವುದರಲ್ಲಿ ನಮ್ಮ ಗ್ರಾಮೀಣ ಜನತೆ ಸಂಪೂರ್ಣ ವಿಫಲರಾಗಿದ್ದಾರೆ.

ಇಂದಿನ ಪ್ರಮುಖ ಉಪಯೋಗವೆಂದರೆ ಆನ್‌ಲೈನ್ ವ್ಯಾಪಾರ(ಅಂಗಡಿಯ ಬದಲಾಗಿ ಅಂತರ್‌ಜಾಲದಲ್ಲಿ ಕೋಳ್ಳುವುದು).
ಈ ಕಾಮರ್ಸ್ ವೆಬ್‌ಸೈಟ್‌ಗಳಾದ ಪ್ಲಿಪ್‌ಕಾರ್ಟ್, ಅಮೇಜಾನ್, ಸ್ನಾಪ್‌ಡೀಲ್ ಹಾಗು ಆಲಿಬಾಬಾ ಮುಂತಾದವುಗಳು ಗೃಹಪಯೋಗಿ ಮತ್ತು ಇತರೆ ವಸ್ತುಗಳನ್ನು ನೇರವಾಗಿ ಮಾರಟ ಮಾಡುತ್ತಿವೆ, ಶುಲ್ಕ ವಿನಾಯಿತಿ ಮತ್ತು ಹಲವಾರು ಕೊಡುಗೆಗಳನ್ನು ನೀಡುತ್ತಿವೆ, ಆದರೆ ಇದರ ಲಾಭವು ಕೇವಲ ನಗರ ಪ್ರದೇಶದ ಜನರಿಗೆ ಹಾಗೂ ವಿದ್ಯಾವಂತರಿಗೆ ಸಿಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಈ ಲಾಭ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಗೂಗಲ್ ಸಂಸ್ಥೆ ೨೦೧೪ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕೇವಲ ೩.೫ ಕೋಟಿ ಜನರು ಆನ್‌ಲೈನ್‌ನಲ್ಲಿ ಖರೀದಿ ಮಾಡುತ್ತಿದ್ದು ಇನ್ನುಳಿದ ೧೨೪ ಕೋಟಿ ಜನರು ಅಪ್‌ಲೈನ್‌ನಲ್ಲಿ (ಅಂಗಡಿ) ಖರೀದಿಸುತ್ತಿದ್ದಾರೆ. ಇವರಲ್ಲಿ ಗ್ರಾಮೀಣ ಪ್ರದೇಶದವರೆ ಹೆಚ್ಚು.
ಆನ್‌ಲೈನ್ ಮುಖಾಂತರ ಖರೀದಿಸಿದ ಟಿ.ವಿ, ರೆಪ್ರೀಜರೆಟರ್ ಮುಂತಾದ ಗೃಹಪಯೋಗಿ ವಸ್ತುಗಳು ಗ್ರಾಮೀಣ ಪ್ರದೇಶವನ್ನು ತಲುಪುತ್ತಿಲ್ಲ. ಅವು ಕೇವಲ ನಗರ ಪ್ರದೇಶ ಅಂದರೆ ಜಿಲ್ಲಾ ಕೇಂದ್ರಗಳಿಗೆ ಮಾತ್ರ ತಲುಪುತ್ತಿದೆ.

ಬಡವರು, ಅವಿದ್ಯಾವಂತರು ಮತ್ತು ಗ್ರಾಮೀಣ ಜನರಿಗೆ ಆನ್‌ಲೈನ್ ಉಪಯೋಗವನ್ನು ತಲುಪಿಸುವುದು ಈ–ನೆಟ್‌ ಸಂಸ್ಥೆ ಸದುದ್ದೇಶವಾಗಿದ್ದು, ನಗರ-ಗ್ರಾಮೀಣ, ವಿದ್ಯಾವಂತ- ಅವಿದ್ಯಾವಂತರ ನಡುವಿನ ಅಂತರವನ್ನು “ಡಿಜಿಟಲ್ ಶಾಪಿಂಗ್ ಮಾಲ್” (ಡಿಜಿಟಲ್ ಮಾರಾಟ ಮಳಿಗೆ) ಮೂಲಕ ಕಡಿಮೆ ಮಾಡುವುದು ಈನೆಟ್‌ನ ಸದುದ್ದೇಶವಾಗಿದೆ.

ಪ್ರಸ್ತುತ ಈ–ನೆಟ್ ಸಂಸ್ಥೆ ತನ್ನ ಮೊದಲ “ಡಿಜಿಟಲ್ ಶಾಪಿಂಗ್ ಮಾಲ್” ಅನ್ನು ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ ತಾಲ್ಲೂಕಿನ, ಶಿರಾಳಕೋಪ್ಪದಲ್ಲಿ ತೆರೆದಿದೆ.
(ಸೂಚನೆ:- “ಡಿಜಿಟಲ್ ಶಾಪಿಂಗ್ ಮಾಲ್” ಬಗ್ಗೆ ಹಲವಾರು ಸುದ್ದಿ ಮಾದ್ಯಮಗಳು ವರದಿ ಪ್ರಕಟಿಸಿದ್ದು, ವಿವರಗಳಿಗಾಗಿ “ಮಾದ್ಯಮದಲ್ಲಿ ಈ–ನೆಟ್” ಕ್ಲಿಕ್ ಮಾಡಿ)

ನಾವೇಕೆ ಕನ್ನಡ ಪ್ರತಿಭಾನ್ವೇಷಣೆ ಮಾಡುತ್ತಿದ್ದೇವೆ?
ಈ–ನೆಟ್‌ಗೂ ಕನ್ನಡಕ್ಕೂ ಸಂಬಂಧವೇನು ? ಒಂದು ಡಿಜಿಟಲ್ ಮಾಲ್ ಹೊಂದಿರುವ ಈ–ನೆಟ್ ಏಕೆ ಕನ್ನಡ ಪ್ರತಿಭಾನ್ವೇಷಣೆ ಮಾಡುತ್ತಿದೆ ? ಈ–ನೆಟ್‌ಗೂ ಕನ್ನಡಕ್ಕೂ ಇರುವ ಸಂಭಂದವಾದರು ಏನು? ಈ ಎಲ್ಲಾ ಪ್ರಶ್ನೆಗಳು ತಮ್ಮೇಲ್ಲರ ಮನದಲ್ಲಿ ಮೂಡಿದಲ್ಲಿ ಉತ್ತರ ಕೆಳಗಿದೆ,

ತಮಗೆ ಮಯೂರ ವರ್ಮನ ಪರಿಚಯವಿದೆಯೇ?
ಹಲವು ಕನ್ನಡಿರಿಗರಿಗೆ ಈ ಹೆಸರು ಪರಿಚಿತ, ಆದರೆ ಮಯೂರ ಯಾರೆಂದು ಕೇಳಿದರೆ ಅವರಿಂದ ಬರುವ ಉತ್ತರ ಡಾ||ರಾಜ್‌ಕುಮಾರ್ ರವರ ಮಯೂರ ಚಲನಚಿತ್ರ.
ಆಶ್ಚರ್ಯಕರ ಸಂಗತಿ ಏನೆಂದರೆ ಮಯೂರ ವರ್ಮ (೩೪೫-೩೬೫ ಸಿ.ಇ) ಕನ್ನಡದ ಮೊಟ್ಟ ಮೂದಲ ದೂರೆ, ಮಯೂರ ವರ್ಮ ಕದಂಬ ವಂಶದವನಾಗಿದ್ದು (೩೪೫-೫೨೫ ಸಿ.ಇ),ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದಲ್ಲಿ ಜನ್ಮ ಪಡೆದಿದ್ದು, ಕನ್ನಡವನ್ನೇ ತನ್ನ ಆಡಳಿತ ಭಾಷೆ ಮಾಡಿಕೊಂಡ ದೊರೆಗಳಲ್ಲಿ ಮೊದಲಿಗ.

ಈ–ನೆಟ್ ಸಂಸ್ಥೆ ಶಿವಮೊಗ್ಗ ಜಿಲ್ಲೆಯಲ್ಲಿ ಜನ್ಮತಳೆದಿದ್ದು, ಮಯೂರ ವರ್ಮನ ಜನ್ಮಸ್ಥಳದಿಂದ ಕೇವಲ ೪ ಕಿಲೋಮೀಟರ್ ಅಂತರದಲ್ಲಿ ತನ್ನ ಮುಖ್ಯ ಕಛೇರಿ ಹೊಂದಿದೆ. ಈ ಕಾರಣದಿಂದಾಗಿ ಈ–ನೆಟ್ ಕನ್ನಡ ಪ್ರತಿಭಾನ್ವೇಷಣೆ ಮಾಡುತ್ತಿದೆ.
ಮಯೂರ ವರ್ಮ ಬಗ್ಗೆ ಹಾಗೂ ಕನ್ನಡದ ಇತಿಹಾಸ, ಸಾಹಿತ್ಯ, ಕವಿಗಳ  ಬಗ್ಗೆ ಮತ್ತು ಅವರ ಸಂಶೋಧನೆಗಳ ಬಗ್ಗೆ ಕನ್ನಡಿಗರಲ್ಲಿ ಅರಿವು ಮೂಡಿಸಲು ಬಯಸಿದ್ದು “ಕನ್ನಡ ಪ್ರತಿಭಾನ್ವೇಷಣೆ” ಅದಕ್ಕೋಂದು ವೇದಿಕೆಯಾಗಿದೆ.

ಕನ್ನಡಕ್ಕಾಗಿ ಈ ನೆಟ್‌ನ ಕೊಡುಗೆ ಏನು?
ಈನೆಟ್ ಸಂಸ್ಥಾಪಕರಲ್ಲಿ ಒಬ್ಬರಾದ ಎಂ.ನವೀನ್ ಕುಮಾರ್ ರವರು ಮಯೂರ ವರ್ಮನ ಬಗ್ಗೆ ಮತ್ತು ತಾಳಗುಂದದ ಬಗ್ಗೆ ಅರಿವು ಮೂಡಿಸುವ ಹಲವಾರು ಪ್ರಯತ್ನ ಮಾಡಿದ್ದಾರೆ.
“ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿ ಪ್ರತಿಷ್ಠಾನ” ಎಂಬ ಸಂಸ್ಥೆಯನ್ನು ಜೂನ್ ೨೦೧೧ರಲ್ಲಿ ನವೀನ್ ಕುಮಾರ್ (ಈನೆಟ್ ಸಂಸ್ಥಾಪಕ) ಸ್ಥಾಪಿಸಿದ್ದು, ಕನ್ನಡ,ತಾಳಗುಂದ ಮತ್ತು ಮಯೂರ ವರ್ಮನ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅವರು  ಯಶಸ್ವಿಯಾಗಿ ಏರ್ಪಡಿಸಿದ್ದಾರೆ, ಅದರಲ್ಲಿ “ತಾಳಗುಂದ ಉತ್ಸವ” ಪ್ರಮುಖವಾದುದು.

ಎಂ.ನವೀನ್ ಕುಮಾರ್ ರವರು ತಾಳಗುಂದ ಮತ್ತು ಮಯೂರ ವರ್ಮನ ಬಗ್ಗೆ ಹಲವಾರು ಲೇಖನಗಳನ್ನು ಬರೆದಿದ್ದು, ನಾಡಿನ ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
(ವಿವರಗಳಿಗಾಗಿ ಪೋಟೊ ಗ್ಯಾಲರಿ ನೋಡಿರಿ)