ಕ.ಸ.ಅ.ಪ್ರದ  ಬಗ್ಗೆ

ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿ ಪ್ರತಿಷ್ಠಾನ

“ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿ ಪ್ರತಿಷ್ಠಾನ” ಎಂಬ ಸಂಸ್ಥೆಯನ್ನು ಜೂನ್ 2011ರಲ್ಲಿ ಎಂ.ನವೀನ್ ಕುಮಾರ್  (ಈ-ನೆಟ್ ಸಂಸ್ಥಾಪಕರು)ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಸ್ಥಾಪಿಸಿದ್ದು, ಕನ್ನಡ, ತಾಳಗುಂದ ಮತ್ತು ಮಯೂರ ವರ್ಮನ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅವರು ಏರ್ಪಡಿಸಿದ್ದು ಯಶಸ್ವಿಯಾಗಿದ್ದಾರೆ,ಅವುಗಳಲ್ಲಿ “ತಾಳಗುಂದ ಉತ್ಸವ” ಪ್ರಮುಖವಾದುದು.

ಈ-ನೆಟ್ ಸಂಸ್ಥಾಪಕರಲ್ಲಿ ಒಬ್ಬರಾದ ಎಂ.ನವೀನ್ ಕುಮಾರವರು ಮಯೂರ ವರ್ಮನ ಬಗ್ಗೆ ಮತ್ತು ತಾಳಗುಂದದ ಬಗ್ಗೆ ಅರಿವು ಮೂಡಿಸುವ ಹಲವಾರು ಪ್ರಯತ್ನ ಮಾಡಿದ್ದಾರೆ.

ವಿವರಗಳಿಗಾಗಿಮಾಧ್ಯಮದಲ್ಲಿ ಕ...ಪ್ರಪುಟವನ್ನು  ನೋಡಿರಿ.

 

ನಾಡಿನ ಹಲವು ಪ್ರಮುಖರು “ತಾಳಗುಂದ”ಕ್ಕೆ ಭೇಟಿ ನೀಟಿದ್ದು, ವಿದೇಶಿಯರು ಸೇರಿದಂತೆ ಹಲವಾರು ಪ್ರಮಖರು  ಸ್ಥಳ ವೀಕ್ಷಣೆ ಮಾಡಿದ್ದಾರೆ. ಅವರಲ್ಲಿ              ಡಾ|| ಸುಧಾ ನಾರಾಯಣ್  ಮೂರ್ತಿ (ಅಧ್ಯಕ್ಷರು,ಇನ್ಪೋಸಿಸ್ ಪ್ರತಿಷ್ಠಾನ),  ಚಿತ್ರದುರ್ಗದ  ಡಾ|| ಮರುಘರಾಜೇಂದ್ರ ಶರಣರು, ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷರಾದ ಭೀಮಾಶಂಕರ ಪಾಟೀಲ ಪ್ರಮುಖರು.

ವಿವರಗಳಿಗಾಗಿಫೋಟೋಗ್ಯಾಲರಿವೀಕ್ಷಿಸಿ.

ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿ ಪ್ರತಿಷ್ಠಾನ ಧ್ಯೇಯೋದ್ದೇಶಗಳು
*   ಕನ್ನಡದ ಸಂಶೋಧನೆ ಮತ್ತು ಅಭಿವೃದ್ದಿ  (ಕೇವಲ ಭಾಷೆಯಷ್ಟೆ ಅಲ್ಲದೆ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯದ ಅಭಿವೃದ್ದಿ).

*   ಕನ್ನಡದ ಐತಿಹಾಸಿಕ ಸ್ಥಳಗಳ ಸಂಶೋಧನೆ ಮತ್ತು ಅಭಿವೃದ್ದಿ.
*   ಕನ್ನಡ ತಂತ್ರಜ್ಞಾನದ ಅಭಿವೃದ್ದಿ.
*   ನಾಡಿನ ವಿವಿಧ ಪ್ರಕಾರದ ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಹಕರಿಸುವುದು.
*    ಹಲವು ಬಗೆಯ ಕನ್ನಡ ಸಾಹಿತ್ಯದ ಬಗ್ಗೆ ಓದುಗರನ್ನು ಉತ್ತೇಜಿಸುವುದು.
*    ಕನ್ನಡದ ಐತಿಹಾಸಿಕ ಸ್ಥಳಗಳ ಸಂಶೋಧನೆ ಮತ್ತು ಅಭಿವೃದ್ದಿ.
*    ಕನ್ನಡಕ್ಕಾಗಿ ಮತ್ತು ಅದರ ಕಲಿಕೆಗಾಗಿ ಪ್ರತ್ಯೇಕ ವೆಬ್‌ಸೈಟ್ ಗಳ ನಿರ್ಮಾಣ.
*    ನಾಡಿನ ಹಲವು ಗ್ರಾಮೀಣ ಆಟಗಳು ಮತ್ತು ಜಾನಪದ ಸಂಪತ್ತು ಸಂರಕ್ಷಿಸುವುದು ಮತ್ತು ಉತ್ತೇಜಿಸುವುದು.

ಕಾರ್ಯಕ್ರಮಗಳು
*   ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸುವುದು.
*   ಸುದ್ದಿ ಪತ್ರಿಕೆ, ಕನ್ನಡದ ಕುರಿತಾದ ಪುಸ್ತಕ ಮತ್ತು ಮಾಸಿಕ ಪತ್ರಿಕೆಗಳನ್ನು ಪ್ರಕಟಿಸುವುದು.
*   ಡಿಜಿಟಲ್ ಕನ್ನಡ ಗ್ರಂಥಾಲಯ ಸ್ಥಾಪಿಸುವುದು.
*   ಪ್ರಬಂಧ ಸ್ಪರ್ದೆ, ಚರ್ಚಾ ಸ್ಪರ್ದೆಗಳನ್ನು ಏರ್ಪಡಿಸುವುದು.
*   ಕನ್ನಡದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದು.
*   ಕನ್ನಡದ ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ಸಂಶೋಧನೆ ಕೇಂದ್ರವನ್ನು ಸ್ಥಾಪಿಸುವುದು.
*   ಕನ್ನಡದ ಐತಿಹಾಸಿಕ ಸ್ಥಳಗಳ ‘‘ಉತ್ಸವ‘‘ ಏರ್ಪಡಿಸುವುದು