ಪರೀಕ್ಷೆಯ ಬಗ್ಗೆ

ಪೀಠಿಕೆ
ಅಮ್ಮನ ಬಿಸಿಯುಸಿರು ಎರೆದು, ಹಸಿವಿಗೆ ಅಮೃತದ ತುತ್ತು ನೀಡಿ, ಭಾವಕೆ ಜೀವ ತುಂಬಿದ ಪರಿಸರವ ಪಸರಿಸಿ,
ಬದುಕಿಗೆ ಹೊಸ ಭಾಷ್ಯ ಬರೆದ, ಪ್ರಕೃತಿ ಸೊಬಗಿನ ಮಗಳಾದ ಕರ್ನಾಟಕವೆಂಬ ಕನ್ನಡ ತಾಯಿಯ ಮಡಿಲಲ್ಲಿ ಬದುಕುತ್ತಿರುವ ನಾವೆಲ್ಲರೂ ಧನ್ಯರೆ…
ಕನ್ನಡ ಭಾಷಾ ಜೀವಂತಿಕೆಯ ಶಕ್ತಿ ನೆಲೆಗಳಾದ ಶಾಲೆಗಳು ಕನ್ನಡತನದ ಸ್ವಂತಿಕೆಯ ರಾಯಭಾರಿಗಳಾದ ಕನ್ನಡ ಭೋದನೆಯ ಶಿಕ್ಷಕರು,
ಕನ್ನಡದ ಕೀರ್ತಿ ಧ್ವಜಗಳಾದ ವಿದ್ಯಾರ್ಥಿಗಳು, ಈ ಮೂರು ಚಲನಶೀಲ ವಲಯಗಳನ್ನ ಕನ್ನಡ ಭಾಷಾ ಸಾಮಥ್ಯದ ಅರ್ಥಗ್ರಹಿಕೆಯನ್ನು
ಅರಿಯುವುದರ ಮೂಲಕ, ಜಾಗತಿಕ ಮಟ್ಟಕ್ಕೆ ನಮ್ಮ ಭಾಷೆಯನ್ನು ಕೊಂಡೊಯ್ಯುವಂತಹ ಪ್ರತಿಭೆಗಳನ್ನಾಗಿಸಬೇಕೆಂಬ ಆಶಯದಿಂದ
ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ನೋ).ಈ ಪರೀಕ್ಷೆಯನ್ನು ಆಯೋಜಿಸಿದೆ.

ಮಯೂರ ಕನ್ನಡ ಪ್ರತಿಭಾನ್ವೇಷಣೆಯ ಧ್ಯೇಯ
*   ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾಭಿಮಾನಕ್ಕೆ ಉತ್ತೇಜನ.
*   ಕನ್ನಡ ಪ್ರತಿಭೆಗಳ ಪ್ರತಿಭಾನ್ವೇಷಣೆ.
*   ಕನ್ನಡ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನ
*   ಶಿಕ್ಷಣ ವಲಯದಲ್ಲಿ ಕನ್ನಡ ಜಾಗೃತಿಯ ಅಭಿಯಾನ.

ಗುರಿ
ಕನ್ನಡ ಭಾಷಾಭಿವೃದ್ಧಿ ಮತ್ತು ಜಾಗೃತಿ

ಫಲಿತಾಂಶ
*   ವಿವಿಧ ಸರ್ಕಾರಿ ಉದ್ಯೋಗಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಲು ಹಾಗೂ ಉದ್ಯೋಗ ಪಡೆಯಲು ಸಹಕಾರಿ.
*   ವ್ಯಾಕರಣ ಹಾಗೂ ಸಾಮಾನ್ಯ ಜ್ಞಾನದ ಬಗ್ಗೆ ಇತರ ವಿದ್ಯಾರ್ಥಿಗಳಿಗಿಂತ ಆಸಕ್ತಿ ಹೆಚ್ಚಳ.
*   ಪಠ್ಯ-ಪರೀಕ್ಷೆಯಲ್ಲಿ ಕೂಡ ಹೆಚ್ಚಿನ ಅಂಕಗಳಿಸುವ ಮೂಲಕ ಜೀವನ ಉನ್ನತಿಯತ್ತ ಸಾಗಲು ಪ್ರೇರಣೆ.
*   ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಬಗ್ಗೆ ಆಸಕ್ತಿ ಹೆಚ್ಚುವುದು.
*   ಶಿಕ್ಷಕ ಮತ್ತು ಪೋಷಕರ ವಲಯದಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡುವುದು.
*   ಕನ್ನಡ ಭಾಷಾ ಪ್ರತಿಭೆಗಳಿಗೆ ಗೌರವಯುತ ಪುರಸ್ಕಾರ ಲಭಿಸುವುದು.