ಪೀಠಿಕೆ

 

 

ಅಮ್ಮನ ಬಿಸಿಯುಸಿರು ಎರೆದು, ಹಸಿವಿಗೆ ಅಮೃತದ ತುತ್ತು ನೀಡಿ, ಭಾವಕೆ ಜೀವ ತುಂಬಿದ ಪರಿಸರವ ಪಸರಿಸಿ,
ಬದುಕಿಗೆ ಹೊಸ ಭಾಷ್ಯ ಬರೆದ, ಪ್ರಕೃತಿ ಸೊಬಗಿನ ಮಗಳಾದ ಕರ್ನಾಟಕವೆಂಬ ಕನ್ನಡ ತಾಯಿಯ ಮಡಿಲಲ್ಲಿ ಬದುಕುತ್ತಿರುವ ನಾವೆಲ್ಲರೂ ಧನ್ಯರೆ…
ಕನ್ನಡ ಭಾಷಾ ಜೀವಂತಿಕೆಯ ಶಕ್ತಿ ನೆಲೆಗಳಾದ ಶಾಲೆಗಳು ಕನ್ನಡತನದ ಸ್ವಂತಿಕೆಯ ರಾಯಭಾರಿಗಳಾದ ಕನ್ನಡ ಭೋದನೆಯ ಶಿಕ್ಷಕರು,
ಕನ್ನಡದ ಕೀರ್ತಿ ಧ್ವಜಗಳಾದ ವಿದ್ಯಾರ್ಥಿಗಳು, ಈ ಮೂರು ಚಲನಶೀಲ ವಲಯಗಳನ್ನ ಕನ್ನಡ ಭಾಷಾ ಸಾಮಥ್ಯದ ಅರ್ಥಗ್ರಹಿಕೆಯನ್ನು
ಅರಿಯುವುದರ ಮೂಲಕ, ಜಾಗತಿಕ ಮಟ್ಟಕ್ಕೆ ನಮ್ಮ ಭಾಷೆಯನ್ನು ಕೊಂಡೊಯ್ಯುವಂತಹ ಪ್ರತಿಭೆಗಳನ್ನಾಗಿಸಬೇಕೆಂಬ ಆಶಯದಿಂದ
ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ನೋ).ಈ ಪರೀಕ್ಷೆಯನ್ನು ಆಯೋಜಿಸಿದೆ.

ಮಯೂರ ಕನ್ನಡ ಪ್ರತಿಭಾನ್ವೇಷಣೆ ಪರೀಕ್ಷೆ ಆಯೋಜನೆಗೆ ಕಾರಣ ?

 

 

ಕೆಲವು ಸ್ನೇಹಿತರಿಗೆ, ಈ ಕನ್ನಡ ಪರೀಕ್ಷೆಯನ್ನು ಆಯೋಜಿಸಿರುವ ಬಗ್ಗೆ ಕುತೂಹಲ ಹಾಗೂ ಪ್ರಶ್ನೆಗಳಿರಬಹುದು ಅದಕ್ಕೆ ಉತ್ತರ ಈ ಕೆಳಗೆ ನಿಮಗೆ ತಿಳಿಯುತ್ತದೆ.

ನಿಮಗೆ ಮಯೂರ ವರ್ಮ ಗೊತ್ತಾ ? ಮಯೂರ ವರ್ಮನ ಬಗ್ಗೆ ತಿಳಿದಿದ್ದೀರಾ ?

 

 

ಈ ಹೆಸರಿನ ಅರಿವು ಕನ್ನಡ ನಾಡಿನ ಬಹುತೇಕರಿಗೆ ಇದೆ, ಕಾರಣ ಕನ್ನಡ ಕಲಾದೈವ ಎಂದೇ ಪ್ರಸಿದ್ದರಾಗಿರುವ ನಟಸಾರ್ವಭೌಮ ಡಾ. ರಾಜ್‌ಕುಮಾರ್ ರವರ ಅಭಿನಯದಲ್ಲೂ ಮೂಡಿ ಬಂದ “ಮಯೂರ” ಕನ್ನಡ ಚಲನಚಿತ್ರ, ಈ ಮೂಲಕ ಕನ್ನಡ ನಾಡಿನ ಅರಸರ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಅವರು ಮಾಡಿದ್ದರು.

ಮಯೂರ ವರ್ಮ (ಕ್ರಿ. ಶ. ೩೪೫ ರಿಂದ ಕ್ರಿ. ಶ. ೩೬೫) ಕನ್ನಡ ನಾಡಿನ ಮೊದಲ ಸಾಮ್ರಾಜ್ಯವಾದ ಕದಂಬ ಕುಲದ ಸ್ಥಾಪಕನಾಗಿದ್ದು, ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಸೇರಿಸಿಕೊಂಡು ಆಡಳಿತ ನಡೆಸಿದ ಮೊದಲ ಅರಸ. ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದ ಗ್ರಾಮದಲ್ಲಿ ಹುಟ್ಟಿದರು.

ಈ ಗ್ರಾಮದಲ್ಲಿಯೇ ಹಲ್ಮಿಡಿಗಿಂತ ಪ್ರಾಚೀನ ಕನ್ನಡ ಶಾಸನ ದೊರಕಿದ್ದು, ಈ ಮೂಲಕ ಕನ್ನಡ ಹಿರಿಮೆಯನ್ನು ತಾಳಗುಂದ ಹೆಚ್ಚಿಸಿದೆ.

ಕನ್ನಡದ ಮೂಲ ಪುರುಷ ಹಾಗೂ ಮೂಲ ನೆಲೆಯ ಬಗ್ಗೆ ಜಾಗೃತಿ ಮೂಡಿಸಲು ಮಯೂರ ವರ್ಮನ ಹೆಸರಿನಲ್ಲಿ ” ಮಯೂರ ಅಕ್ಷರ ವೀರ” ಪ್ರಶಸ್ತಿ ಸ್ಥಾಪಿಸಿ ಕನ್ನಡ ಅಕ್ಷರಬಲ್ಲ ಮಕ್ಕಳಿಗೆ ನೀಡಲಾಗುತ್ತಿದೆ.

* ಕನ್ನಡದ ಮೊದಲ ಅರಸ ಮಯೂರ ವರ್ಮನ ಸ್ಮರಣೆಯಲ್ಲಿ ನಡೆಯುತ್ತಿರುವ ಕನ್ನಡದ ಬಹುದೊಡ್ಡ ಪ್ರತಿಭಾನ್ವೇಷಣೆ ಕಾರ್ಯಕ್ರಮವಿದು.

*ಈ ಪ್ರತಿಭಾನ್ವೇಷಣೆ ಕಾರ್ಯಕ್ರಮ ಅಮೇರಿಕದಲ್ಲಿ ಪ್ರತೀ ವರ್ಷ ನಡೆಯುವ ಜಗತ್ಪ್ರಸಿದ್ದ “ಸ್ಪೆಲಿಂಗ್ ಬೀ” ಕಾರ್ಯಕ್ರಮದ ಸ್ಪೂರ್ತಿಯಿಂದ ನಡೆಯುತ್ತಿದೆ.

*ಈ ಕಾರ್ಯಕ್ರಮವನ್ನು ಕನ್ನಡ ನಾಡು, ನುಡಿ, ಇತಿಹಾಸ ಹಾಗೂ ಸಂಸ್ಕೃತಿಯ ಸಂರಕ್ಷಣೆ ಹಾಗೂ ಅದರ ಬಗ್ಗೆ ಕಳೆದ ೮ ವರ್ಷದಿಂದ  ಜಾಗೃತಿ ಅಭಿಯಾನ ಮಾಡುತ್ತಿರುವ “ಕನ್ನಡ ಸಂಶೋಧನೆ ಮತ್ತು ಅಭಿವೃದ್ದಿ ಪ್ರತಿ” ಹಾಗೂ ಗ್ರಾಮೀಣ ಮಾಹಿತಿ ತಂತ್ರಜ್ಞಾನದ ಸೇವಾ ಕೇಂದ್ರ ” ಈ ನೆಟ್ ಪ್ರತಿಷ್ಟಾನ” ಜಂಟಿಯಾಗಿ ಆಯೋಜನೆ ಮಾಡಿದೆ.

* ೨೦೧೬-೧೭ ನೇ ಸಾಲಿನ ಅಂತಿಮ ಸುತ್ತು ರಾಜ್ಯ ಮಟ್ಟದ ಮಯೂರ ಕನ್ನಡ ಪ್ರತಿಭಾನ್ವೇಷಣೆ ಕಾರ್ಯಕ್ರಮ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆಯಿತು.

( ಫೋಟೋ  ಗ್ಯಾಲರಿಗೆ ಭೇಟಿ ಕೊಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ)

ಮಯೂರ ಕನ್ನಡ ಪ್ರತಿಭಾನ್ವೇಷಣೆಯ ಧ್ಯೇಯ

 

 

*ಕನ್ನಡ ಭಾಷೆ, ನಾಡಿನ ಇತಿಹಾಸ ಹಾಗೂ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವುದು.

* ಕನ್ನಡ ಮಾಧ್ಯಮ ಹೊರತು ಪಡಿಸಿ ಇಂಗ್ಲೀಶ್, ಉರ್ದು, ತೆಲುಗು, ತಮಿಳು, ಇತ್ಯಾದಿ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಅಡಗಿರುವ ಕನ್ನಡ ಪ್ರತಿಭೆಯನ್ನು ಅನಾವರಣ ಮಾಡಲು ಅದ್ಬುತ ಅವಕಾಶ ಕಲ್ಪಿಸುವುದು.

* ಇದರ ಜೊತೆಯಲ್ಲಿ ಕನ್ನಡದ ಮೊದಲ ಸಾಮ್ರಾಟ್ ಮಯೂರ ವರ್ಮನ ಇತಿಹಾಸ ಹಾಗೂ ೨ ಸಾವಿರ ವರ್ಷಗಳ ಪ್ರಾಚೀನ ತಾಳಗುಂದ ಗ್ರಾಮದ ಬಗ್ಗೆ ಜಾಗೃತಿ ಮೂಡಿಸುವುದು.

*ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಕನ್ನಡ ಪ್ರೌಢಿಮೆಯನ್ನು ಪ್ರದರ್ಶನ ಮಾಡಲು ಪ್ರೇರಣೆ ನೀಡುವುದು

* ಮಕ್ಕಳು ಕರ್ನಾಟಕದಾದ್ಯಂತ ಭಾಷೆ, ಸಂಸ್ಕೃತಿ, ಇತಿಹಾಸ ಹಾಗೂ ಜಾನಪದ ಕಲೆಗಳನ್ನು ಅರಿಯಲು, ಕಲಿಯಲು ಈ ಮೂಲಕ ಅವಕಾಶ ಕಲ್ಪಿಸುವುದು.

*ಕನ್ನಡ ಭಾಷೆಯ ಕಾರ್ಯಕ್ರಮ ಒಂದು ವಿನೂತನ ರೀತಿಯ ಜಾಗೃತಿ ಅಭಿಯಾನವಾಗಿದ್ದು, ಕನ್ನಡ ನಾಡಿನ ಮಕ್ಕಳ ಮೂಲಕ ಅವರ ಕುಟುಂಬ ಸದಸ್ಯರಿಗೂ ಕೂಡ ಜಾಗೃತಿ ಮೂಡಿಸುವ ಪ್ರಯತ್ನವನ್ನು ಪ್ರತಿಷ್ಟಾನ ಈ ಮೂಲಕ ಮಾಡುವುದು.

ಗುರಿ

 

 

ಕನ್ನಡ ಭಾಷಾಭಿವೃದ್ಧಿ ಮತ್ತು ಜಾಗೃತಿ.

ಫಲಿತಾಂಶ

 

 

*ವಿವಿಧ ಸರ್ಕಾರಿ ಉದ್ಯೋಗಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಲು ಹಾಗೂ ಉದ್ಯೋಗ ಪಡೆಯಲು ಸಹಕಾರಿ.

*ವ್ಯಾಕರಣ ಹಾಗೂ ಸಾಮಾನ್ಯ ಜ್ಞಾನದ ಬಗ್ಗೆ ಇತರ ವಿದ್ಯಾರ್ಥಿಗಳಿಗಿಂತ ಆಸಕ್ತಿ ಹೆಚ್ಚಳ.

*ಪಠ್ಯ-ಪರೀಕ್ಷೆಯಲ್ಲಿ ಕೂಡ ಹೆಚ್ಚಿನ ಅಂಕಗಳಿಸುವ ಮೂಲಕ ಜೀವನ ಉನ್ನತಿಯತ್ತ ಸಾಗಲು ಪ್ರೇರಣೆ.

*ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಬಗ್ಗೆ ಆಸಕ್ತಿ ಹೆಚ್ಚುವುದು.

*ಶಿಕ್ಷಕ ಮತ್ತು ಪೋಷಕರ ವಲಯದಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡುವುದು.

*ಕನ್ನಡ ಭಾಷಾ ಪ್ರತಿಭೆಗಳಿಗೆ ಗೌರವಯುತ ಪುರಸ್ಕಾರ ಲಭಿಸುವುದು.

ಸಾಮಾಜಿಕ ಕಳಕಳಿ

 

 

*ಈ ಕಾರ್ಯಕ್ರಮವು ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಲು , ಕನ್ನಡ ಅಕ್ಷರಗಳನ್ನು ಕಲಿಯಲು ಅವಕಾಶ ಕಲ್ಪಿಸಿದೆ.

*ಕನ್ನಡಿಗರು ಹಾಗೂ ಕನ್ನಡೇತರರು ಒಂದೆಡೆ ಸೇರಲು ಒಂದು ಅದ್ಬುತ ವೇದಿಕೆ ನೀಡಲಾಗಿದ್ದು, ಈ ಮೂಲಕ ಕನ್ನಡಿಗರು ಹಾಗೂ ಕನ್ನಡೇತರರ ಸ್ನೇಹ ಬಾಂಧವ್ಯಗಳನ್ನು ಗಟ್ಟಿಗೊಳಿಸಲು ಸಹಕಾರಿಯಾಗುತ್ತಿದೆ.

*ವಿದ್ಯಾರ್ಥಿಗಳು ಬಾಲ್ಯದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ಮೂಲಕ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದಿರಿಸುವ ಸ್ಪೂರ್ತಿ ಹಾಗೂ ದೈರ್ಯವನ್ನು ಪಡೆಯುತ್ತಾರೆ.

*ಇತಿಹಾಸ ಕಲಿಯುವುದರಿಂದ, ಅರಿಯುವದರಿಂದ ಮಕ್ಕಳಲ್ಲಿ ವಿಶೇಷವಾದ ಕೌಶಲ್ಯಗಳು ಬೆಳೆಯಲು ಹಾಗೂ ವಿನೂತನ ಆವಿಷ್ಕಾರ ಮಾಡಲು ಪ್ರೇರಣೆ ನೀಡುತ್ತದೆ.