ಹಂತ 1:-  ವಿದ್ಯಾರ್ಥಿ ನೋಂದಾವಣೆ (Student Registration)

 • ಕಳೆದ ಬಾರಿಯ ಬೇಡಿಕೆಯಂತೆ, ಜನಾಪೇಕ್ಷೆಯ ಮೇರೆಗೆ ವಿದ್ಯಾರ್ಥಿಗಳು ಮುಕ್ತವಾಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗಿದ್ದು, ವಿದ್ಯಾರ್ಥಿಗಳು ಮುಕ್ತವಾಗಿ ಮತ್ತು ಉಚಿತವಾಗಿ ಅರ್ಜಿ ಸಲ್ಲಿಸಬಹುದು.
 • ಪ್ರತಿಷ್ಠಾನ ಮುಕ್ತವಾಗಿ ಹಾಕಲಾದ ಪ್ರತೀ ಅರ್ಜಿಯನ್ನು ಪರಿಶೀಲಿಸಿ ನಂತರ ಅನುಮೋದನೆ ನೀಡುತ್ತದೆ.

ಹಂತ 2:-  ಅರ್ಜಿ ಸ್ಥಿತಿ (Application Status)

 • ಅರ್ಜಿ ಹಾಕಿದ 72 ಗಂಟೆಯ ಒಳಗೆ  ಪ್ರತಿಷ್ಠಾನ  ಅರ್ಜಿಯನ್ನು ಅನುಮೋದಿಸುತ್ತದೆ,  ನಂತರ ನಮ್ಮ ಅಂತರ್ಜಾಲ ತಾಣಕ್ಕೆ ಭೇಟಿ ನೀಡತಕ್ಕದ್ದು ಮತ್ತು ಅರ್ಜಿ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳತಕ್ಕದ್ದು.
 • ಅರ್ಜಿ ಅನುಮೋದನೆಗೊಂಡಿದ್ದರೆ ಅರ್ಜಿಯನ್ನು ಮುದ್ರಿಸಿಕೊಳ್ಳಬಹುದು.

ಹಂತ 3:-  ಅರ್ಜಿ ಮುದ್ರಣ (Print Application)

 • ಅರ್ಜಿ ಅನುಮೋದನೆಗೊಂಡ ನಂತರ ಅರ್ಜಿಯನ್ನು ಮುದ್ರಿಸಿಕೊಳ್ಳಬಹುದಾಗಿದೆ.
 • ಮುದ್ರಣಗೊಂಡ ಅರ್ಜಿಗೆ ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ  ಚಿತ್ರವನ್ನು ಲಗತ್ತಿಸಿ, ತಮ್ಮ ಬಳಿ ಕಾಯ್ದಿರಿಸತಕ್ಕದ್ದು ಹಾಗೂ ಪರೀಕ್ಷಾ ಸಂದರ್ಭದಲ್ಲಿ ನಮ್ಮ ಸಂಯೋಜಕರಿಗೆ ಅರ್ಜಿಯನ್ನು ನೀಡತಕ್ಕದ್ದು.

ದಯವಿಟ್ಟು ಗಮನಿಸಿ:

 • ಮಯೂರ ಕನ್ನಡ ಪ್ರತಿಭಾನ್ವೇಷಣೆಯು “ತೆರೆದ ಪುಸ್ತಕದ” ಪರೀಕ್ಷೆಯಾಗಿದ್ದು. ಪ್ರತಿಷ್ಠಾನ ಮಯೂರ ಅಕ್ಷರವೀರ ಪರೀಕ್ಷಾ ಸಾಮಗ್ರಿಯನ್ನು ವಿತರಿಸುತ್ತದೆ.  ಪ್ರತಿಷ್ಠಾನ ವಿತರಿಸುವ ಪುಸ್ತಕವನ್ನು ಪರೀಕ್ಷಾ ಕೊಠಡಿಗೆ ಕೊಂಡೊಯ್ಯುವ ಅವಕಾಶವನ್ನು ಕಲ್ಪಿಸಲಾಗಿದೆ.
 • ಮಯೂರ ಅಕ್ಷರವೀರ ಪರೀಕ್ಷಾ ಸಾಮಗ್ರಿಯ ಬೆಲೆ  ರೂಪಾಯಿ 288/- ಆಗಿರುತ್ತದೆ.
 • ಆಸಕ್ತ ವಿಧ್ಯಾರ್ಥಿಗಳು ನಮ್ಮ ಸಂಯೋಜಕರನ್ನು ಸಂಪರ್ಕಿಸಿ ಮಯೂರ ಅಕ್ಷರವೀರ ಪರೀಕ್ಷಾ ಸಾಮಗ್ರಿ ಪಡೆದುಕೊಳ್ಳಬಹುದು.

ಹಂತ 4:-  ಪರೀಕ್ಷಾ ಕಿಟ್ ದೃಡೀಕರಣ (Exam kit Confirmation)

 • ಮಯೂರ ಅಕ್ಷರವೀರ ಪರೀಕ್ಷೆ ಬರೆಯಲು “ಮಯೂರ ಅಕ್ಷರವೀರ ಪರೀಕ್ಷಾ ಸಾಮಗ್ರಿ ಅಥವಾ ಪುಸ್ತಕ ಕಡ್ಡಾಯವೇನಲ್ಲ.
 • ತಾವು ಈಗಾಗಲೇ ಮಯೂರ ಅಕ್ಷರವೀರ ಪರೀಕ್ಷಾ ಸಾಮಗ್ರಿ ಕೊಂಡುಕೊಂಡಿದ್ದರೆ, “ಪರೀಕ್ಷಾ ಕಿಟ್ ದೃಡೀಕರಣದಲ್ಲಿ” ದೃಡೀಕರಣ ಮಾಡಿಕೊಳ್ಳತಕ್ಕದ್ದು.